ಜೇಸಿಐ ಸುಳ್ಯ ಪಯಸ್ವಿನಿಗೆ ಕೆಸರ್ ಡೊಂಜಿ ದಿನದ ಕ್ರೀಡಾಕೂಟದಲ್ಲಿ ಹಲವಾರು ಬಹುಮಾನ

ಜೇಸಿಐ ಭಾರತ ವಲಯ-15ರ ಜೇಎಸಿ ಅಲ್ಯುಮಿನಿ ಕ್ಲಬ್ ಹಾಗೂ ಜೇಸಿಐ ಭಾರತದ ಸಹಯೋಗದಲ್ಲಿ ಆಗಸ್ಟ್ 2ರಂದು ಕಾರ್ಕಳದ ಸಾಣೂರಿನ ಮುರತ್ತಂಗಡಿ ಗದ್ದೆಯಲ್ಲಿ ನಡೆದ
ಕೆಸರ್ ಡೊಂಜಿ ದಿನದ ಕ್ರೀಡಾಕೂಟದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯು ತನ್ನ ತಂಡದೊಂದಿಗೆ ಭಾಗವಹಿಸಿ ಹಗ್ಗಜಗ್ಗಾಟದ ಸ್ಪರ್ಧೆ ಯಲ್ಲಿ ಪ್ರಥಮ, ತ್ರೋಬಾಲ್ ಸ್ಪರ್ಧೆಯಲ್ಲಿ ದ್ವಿತೀಯ, 100 ಮೀ ಓಟ ಸ್ಪರ್ಧೆಯಲ್ಲಿ ದ್ವಿತೀಯ, ಲಿಂಬೆ ಚಮಚ ಓಟದಲ್ಲಿ ದ್ವಿತೀಯ, ಉಪ್ಪು ಮೂಟೆಯಲ್ಲಿ ದ್ವಿತೀಯ, ಕಂಬಳ ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.



















ಕಾರ‍್ಯಕ್ರಮದಲ್ಲಿ ಜೇಸಿಐ ಭಾರತ ವಲಯ-15ರ ವಲಯಾಧ್ಯಕ್ಷರಾದ ಜೆ.ಎಫ್.ಎಸ್. ಸಂತೋಷ್ ಶೆಟ್ಟಿ, ಜೇಎಸಿ ಚೇರ್ ಮೇನ್ ಅಬ್ದುಲ್ ಜಬ್ಬಾರ್ ಸಾಹೇಬ್ ರವರ ಉಪಸ್ಥಿತಿಯಲ್ಲಿ ಬಹುಮಾನಗಳನ್ನು ಪ್ರದಾನಿಸಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಪೂರ್ವ ವಲಯ ಅಧ್ಯಕ್ಷರಾದ ಪಿಪಿಪಿ ಅಶೋಕ್ ಚೂಂತಾರು
ಕಾರ್ಯದರ್ಶಿ ಜೇಸಿ. ಎಚ್.ಜಿ.ಎಫ್. ತಾರಾ ಮಾದವ ಚೂಂತಾರು, ಮುಖಂಡರಾದ ಸುಪ್ರೀತ್ ಮೋಂಟಡ್ಕ, ಸ್ನಿಗ್ಧ ಮೋಂಟಡ್ಕ ಭಾಗವಹಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top