ಸುಳ್ಯ ತಾಲೂಕು ಅರಂತೋಡು ಗ್ರಾಮದ ಬಾಜಿನಡ್ಕ ವಾಸುದೇವ ಗೌಡರ ಮನೆಗೆ ಬರುವ ರಸ್ತೆಯ ಮಧ್ಯೆ ಹರಿಯುವ ತೋಡಿಗೆ ಅಳವಡಿಸಿದ ಪೈಪ್ ಮೋರಿ ನೀರಿನಲ್ಲಿ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ನೀರಿನಲ್ಲಿ ಕೊಚ್ಚಿ ಮುಂದೆ ಸರಿದಿದೆ. ರಸ್ತೆಯು ಕೂಡ ತುಂಡರಿಸಲ್ಪಟ್ಟು ರಸ್ತೆಯು ಇಬ್ಬಾಗವಾಗಿ ನಿಂತಿದೆ. ಈ ರಸ್ತೆಯು ಮೂರು ಮನೆಗಳಿಗೆ ಸಂಪರ್ಕ ರಸ್ತೆಯಾಗಿದ್ದು, ಆ ಮನೆಯವರು ದೈನಂದಿನ ಕೆಲಸಗಳಿಗೆ ಇದೇ ರಸ್ತೆಯನ್ನು ಅವಲಂಬಿಸಿದ್ದರು. ರಸ್ತೆ ಕೊಚ್ಚಿಹೋಗಿರುವ ಕಾರಣ ಜನರಿಗೆ ಆ ಕಡೆ- ಈ ಕಡೆಗೆ ಹೋಗಲು ಅಸಾಧ್ಯವಾಗಿದೆ.
ಬಾಜಿನಡ್ಕ : ಭಾರೀ ಮಳೆಗೆ ಕೊಚ್ಚಿ ಹೋದ ರಸ್ತೆ













