ಅಜ್ಜಾವರ ಧನಲಕ್ಷ್ಮಿ ಮಹಿಳಾ ಮಂಡಲ(ರಿ) ಇದರ ವತಿಯಿಂದ ಆಗಸ್ಟ್ 3, 2026ರಂದು ಶ್ರೀ ಶಂಕರ ಭಾರತೀ ವೇದಪಾಠ ಶಾಲೆ, ಅಜ್ಜಾವರದಲ್ಲಿ ಆಟಿ ಆಚರಣೆ – 2026 ಕಾರ್ಯಕ್ರಮ ನಡೆಯಿತು.
ಮಹಿಳಾ ಮಂಡಲದ ಅಧ್ಯಕ್ಷೆ ವಿಮಲಾರುಣ ಪಡ್ಡoಬೈಲು ಅಧ್ಯಕ್ಷತೆ ವಹಿಸಿದ್ದರು.
ಮಹಿಷ ಮರ್ದಿನೀ ದೇವಸ್ಥಾನದ
ಧರ್ಮದರ್ಶಿ ಎ. ಭಾಸ್ಕರ ರಾವ್ ಬಯಂಬು ಉದ್ಘಾಟಿಸಿ ಮಾತನಾಡಿ ಆಟಿ ತಿಂಗಳ ವೈಶಿಷ್ಟ್ಯತೆ ಬಗ್ಗೆ ಮಾತನಾಡಿದರು.
ಸಿ.ಆರ್.ಪಿ ಮಮತ ರವೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.ಬಳಿಕ ಮಾತನಾಡಿದ ಅವರು
ಆಟಿಯ ಮಹತ್ವದ ಕುರಿತಾಗಿ ಹಾಗೂ ಪ್ರೀತಿ, ಶ್ರದ್ಧೆ, ಭಕ್ತಿ ಇದ್ದರೆ ನಮ್ಮ ಎಲ್ಲಾ ಕಾರ್ಯಗಳು ಯಶಸ್ಸನ್ನು ಪಡೆಯುತ್ತದೆ. ಎನ್ನುವ ಸಂದೇಶವನ್ನೂ ನೀಡಿದರು. ಕುಮಾರಿ ಲಕ್ಷ್ಮಿ ಪಲ್ಲತ್ತಡ್ಕ ಅಧ್ಯಕ್ಷರು, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ ಇವರು ಸ್ನೇಹಪರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ನಾವೆಲ್ಲರೂ ಒಮ್ಮತದಲ್ಲಿರಬೇಕೆಂಬ ಸಂದೇಶ ನೀಡಿದರು.
ಧನಲಕ್ಷ್ಮೀ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಕವಿತಾ ಪುರುಷೋತ್ತಮ ನಾರ್ಕೋಡ್ ಅವರು
ಹಾಗೂ ಸ್ಥಾಪಕಾಧ್ಯಕ್ಷರಾದ ಜಯಂತಿ ಜನಾರ್ಧನ ಅಜ್ಜಾವರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಆಟಿ ಖಾದ್ಯ ತಯಾರಿಸಿದ ಎಲ್ಲಾ ಮಹಿಳೆಯರಿಗೂ ಉಡುಗೊರೆ ನೀಡಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಧನಲಕ್ಷ್ಮಿ ಮಹಿಳಾ ಮಂಡಲದ ಪದಾಧಿಕಾರಿಗಳು,ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ವೇದಾವತಿ ಬಾಲಚಂದ್ರ ಅವರು, ಸ್ವಾಗತವನ್ನು ಜಯಶ್ರೀ ನಾಗೇಶ್ ಬೇಲ್ಯ ಅವರು, ಧನ್ಯವಾದವನ್ನು ರಮ್ಯಾ ಭವಾನಿ ಹಾಗೂ ನಿರೂಪಣೆಯನ್ನು ವಿಶಾಲ ಕರ್ಲಪ್ಪಾಡಿ ನೆರವೇರಿಸಿದರು.
ಅಜ್ಜಾವರ : ಧನಲಕ್ಷ್ಮೀ ಮಹಿಳಾ ಮಂಡಲ ವತಿಯಿಂದ ಆಟಿ ಆಚರಣೆಯ ಸಂಭ್ರಮ ಕಾರ್ಯಕ್ರಮ













