ದ.ಕ. ಜಿಲ್ಲಾ ಸುಳ್ಯ ತಾಲೂಕಿನ ಸುಳ್ಯ ನಗರ ವ್ಯಾಪ್ತಿಯ ಸಾರ್ವಜನಿಕರು ಉಪಯೋಗಿಸುವ ರಸ್ತೆಗಳು ಕೆಟ್ಟು ಹೋಗಿದ್ದು ಇದನ್ನು ದುರಸ್ತಿ ಪಡಿಸುವಂತೆ ಸುಳ್ಯ ತಾಲೂಕು ಸುಳ್ಯ ಬಿಎಂಎಸ್ ಅಟೋ ರಿಕ್ಷಾ ಚಾಲಕರ ಸಂಘ ಸುಳ್ಯ ಶಾಸಕಿಯರಿಗೆ ಮನವಿ ಸಲ್ಲಿಸಿದೆ.
ರಸ್ತೆಯ ಇಕ್ಕಡೆಗಳ ನೀರು ಹೋಗುವ ಕಣಿ ದುರಸ್ತಿ ಮಾಡದೆ ಇದ್ದು, ಅಲ್ಲದೇ ಬೆಳೆದ ಕಾಡು ಬಲ್ಲೆಗಳಿಂದ ರಸ್ತೆಯು ಕಿರಿದಾಗಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನವನ್ನು ಚಲಾಯಿಸಲು ಆಟೋ ರಿಕ್ಷಾ ಚಾಲಕರಿಗೆ ತೊಂದರೆ ಆಗಿರುತ್ತದೆ.
ಮೇಲೆ ನಮೂದಿಸಿದ ವಿಷಯದ ಕುರಿತು ಹಲವಾರು ಬಾರಿ ನಮ್ಮ ಸಂಘದ ಪದಾಧಿಕಾರಿಗಳು ಸುಳ್ಯ ನಗರ ಪಂಚಾಯತ್‌ನ ಸಂಬಂಧಿತ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಮೌಖಿಕವಾಗಿ ಮನವಿಯನ್ನು ಸಲ್ಲಿಸಿದರೂ ಯಾವುದೇ ಪೂರಕ ಕ್ರಮಗಳನ್ನು ಕೈಗೊಂಡಿರುವುದಿಲ್ಲ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಹಲವು ರಸ್ತೆಗಳಲ್ಲಿ ರಸ್ತೆಗೆ ತಾಗಿರುವ ಮರಗಳ ಕೊಂಬೆಗಳು ಕೂಡಾ ರಸ್ತೆಗೆ ವಾಲಿದ್ದು, ಈ ಕುರಿತು ಸಾರ್ವಜನಿಕರ ಹಾಗೂ ನಮ್ಮ ಆಟೋ ರಿಕ್ಷಾ ವಾಹನದ ರಕ್ಷಣೆ ಕುರಿತು ಮೌಖಿಕ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಆದ್ದರಿಂದ ಈ ಮನವಿ ಕುರಿತು ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ರಸ್ತೆಗಳ ರಿಪೇರಿ ಹಾಗೂ ದುರಸ್ತಿ ಕುರಿತು ಜರೂರಾಗಿ ಕ್ರಮ ಕೈಗೊಳ್ಳಲು ಕೋರಲಾಗಿದೆ.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ,ಕೋಶಾಧಿಕಾರಿ ರವಿ ಎಸ್. ಸಂಘಟನ ಕಾರ್ಯದರ್ಶಿ ಸುಂದರ್ ಪೆರಾಜೆ ,ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ನಿರ್ದೇಶಕರಾದ ಭಾನು ಪ್ರಕಾಶ್ ಬಸ್ ನಿಲ್ದಾಣ, ಹರೀಶ್ ನೆಕ್ರಾಜೆ, ಕಿರಣ್ ಬೆಟ್ಟಂಪಾಡಿ ಉಪಸ್ಥಿತರಿದ್ದರು.
ಸುಳ್ಯ ಬಿಎಂಎಸ್ ಆಟೋ ರಿಕ್ಷಾ ಚಾಲಕರಿಂದ ಸುಳ್ಯ ನಗರದ ರಸ್ತೆ ಚರಂಡಿ ದುರಸ್ತಿ ಮಾಡಿಸುವಂತೆ ಶಾಸಕರಿಗೆ ಮನವಿ













