ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ಜೇಸಿಐ ಸಪ್ತಾಹ ಸುಸ್ನಿಲ 2026 ಕಾರ್ಯಕ್ರಮ ಸುಳ್ಯದ ಪಿಎಂಶ್ರೀ ಸ.ಮಾ.ಹಿ. ಪ್ರಾ ಶಾಲೆಯಲ್ಲಿ ಆಗಸ್ಟ್ 30 ರಂದು ನಡೆಯಿತು.
ಜೇಸಿಐ ಭಾರತ ವಲಯ 15ರ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ವಲಯ ಸಂಯೋಜಕರಾದ ಜೆಎಫ್ಎಂ ಲೋಕೇಶ್ ಅಕ್ರಿಕಟ್ಟೆ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ಸಪ್ತಾಹಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಘಟಕಾಧ್ಯಕ್ಷರಾದ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಜೇಸಿ ಹೆಚ್‌ಜಿಎಫ್ ಅಬ್ದುಲ್ಲಾ ಎ, ಜೇಸಿ ಹೆಚ್‌ಜಿಎಫ್ ಗುರುರಾಜ್ ಅಜ್ಜಾವರ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ರವಿರಾಜ್ ಅಡ್ಕಾರ್, ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಯು.ಪಿ ಶಿವಾನಂದ, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ನ ಶ್ರೀಹರಿ ಪೈಂದೋಡಿ ಮತ್ತು ಪ್ರಸನ್ನ ಐವರ್ನಾಡು ಭಾಗವಹಿಸಿ ಶುಭ ಹಾರೈಸಿದರು.
ಸಪ್ತಾಹ ನಿರ್ದೇಶಕ ವಿನೋದ್ ಮೂಡಗದ್ದೆ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಪ್ರಸನ್ನ ಎಂ. ಆರ್. ಅತಿಥಿಗಳನ್ನು ವೇದಿಕೆಗೆ ಅಹ್ವಾನಿಸಿದರು.
ಸ್ನಿಗ್ಧ ಮೋಂಟಡ್ಕ ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ತಾರಾ ಚೂಂತಾರು ವಂದಿಸಿದರು. .
ಉದ್ಘಾಟನಾ ಕಾರ್ಯಕ್ರಮದ ಬಳಿಕ ಕ್ರಿಯೇಟಿವ್ ಸ್ಕೂಲ್ ಆಪ್ ಆರ್ಟ್ಸ್ ಇವರ ಸಹಕಾರದೊಂದಿಗೆ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಾಲ್ಕು ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.



















