ಕುಕ್ಕುಜಡ್ಕ: ಪೈಲೂರು ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸ್ಥಳೀಯ ನಿವಾಸಿ ಜಗದೀಶ್ ಪೈಲೂರು ಅವರು ಚಿರತೆಯನ್ನು ಗಮನಿಸಿರುವುದಾಗಿ ತಿಳಿದುಬಂದಿದೆ.
ಗ್ರಾಮ ಪಂಚಾಯತ್ ಸಿಬ್ಬಂದಿ ಯಶವಂತ ಚಾಮಡ್ಕರ ಅವರು ವಾಟ್ಸಾಪ್ ಮೂಲಕ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಎರಡು–ಮೂರು ದಿನಗಳ ಹಿಂದೆ ಓಡ್ಯಪ್ಪ ನಾಯ್ಕ್ ಅವರ ನಾಯಿಗೆ ಚಿರತೆ ಕಚ್ಚಿರುವುದಾಗಿಯೂ ವರದಿಯಾಗಿದೆ. ಸಂಜೆ ಹಾಗೂ ರಾತ್ರಿ ವೇಳೆ ಒಂಟಿಯಾಗಿ ಸಂಚರಿಸದಂತೆ ಮತ್ತು ಮಕ್ಕಳು, ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿರಿಸುವಂತೆ ಸೂಚಿಸಲಾಗಿದೆ. ಚಿರತೆ ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಕುಕ್ಕುಜಡ್ಕ : ಚಿರತೆ ಪ್ರತ್ಯಕ್ಷ




















