ಸುಳ್ಯ: ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್‌ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ವನ್ನು ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಉದ್ಘಾಟಿಸಿದರು. ಜಿ.ಪಿ. ಸಂಶುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಸುಧಾಕರ ರೈ ಪಿ.ಬಿ., ಎ.ಸಿ. ವಸಂತ, ಉಜ್ವಲ್ ಊರುಬೈಲ್, ಕಿರಣ್ ಚಂದ್ರ ಪುಷ್ಪಗಿರಿ, ಜಯಪ್ರಕಾಶ್ ರೈ, ವೆಂಕಪ್ಪ ಗೌಡ, ಪಿ.ಎಸ್. ಗಂಗಾಧರ, ಮುಸ್ತಫ, ಶಾಫಿ ಕುತ್ತಮೊಟ್ಟೆ, ಪಿ.ಎ. ಮಹಮ್ಮದ್, ನವೀನ್ ಚಂದ್ರ, ರಿಯಾಜ್ (ಸ್ಟಾರ್ ಟೈಲ್ಸ್) ಉಪಸ್ಥಿತರಿದ್ದರು.
ಈ ರಾಷ್ಟ್ರೀಯ ಮಟ್ಟದ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ವಿವಿಧ ತಂಡಗಳು ಪಾಲ್ಗೊಂಡು ಕ್ರೀಡಾ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.
ಗುರುದತ್ತ್ ನಾಯಕ್ ಸ್ವಾಗತಿಸಿದರು. ಪ್ರಜ್ಞಾ ಒಡಿನಾಳ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ: ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಅಕ್ಷಯ್ ಕೆ.ಸಿ. ಚಾಲನೆ











