ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನ.9 ಮತ್ತು 10ರಂದು ದೀಪಾವಳಿ ವಿಶೇಷ ಪೂಜೆ, ಗೋಪೂಜೆ ಹಾಗೂ ತಂಬಿಲ ಸೇವೆ

ಪಂಜ: ದೀಪಾವಳಿ ಹಬ್ಬದ ಪ್ರಯುಕ್ತ ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವೆಂಬರ್ 9 ಮತ್ತು 10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.





































































ನವೆಂಬರ್ 9ರ ಸೋಮವಾರ ಸಂಜೆ 7 ಗಂಟೆಯಿಂದ ದೇವಸ್ಥಾನದಲ್ಲಿ ಬಲೀಂದ್ರ ಮರ ಹಾಕಿ ಪೂಜೆ ಹಾಗೂ ಗೋಪೂಜೆ ನೆರವೇರಲಿದೆ.

ನವೆಂಬರ್ 10ರ ಮಂಗಳವಾರ ಬೆಳಗ್ಗೆ 9.30ಕ್ಕೆ ಮೂಲಸ್ಥಾನ ಗರಡಿ ಬೈಲಿನಲ್ಲಿ ಬಲೀಂದ್ರ ಮರ ಹಾಕಿ ಪೂಜೆ ನಡೆಯಲಿದೆ. ಬಳಿಕ ಶ್ರೀ ಉಳ್ಳಾಕುಳು ದೈವ ಹಾಗೂ ಶ್ರೀ ಕಾಚು ಕುಜುಂಬ ದೈವಗಳಿಗೆ ತಂಬಿಲ ಸೇವೆ ನೆರವೇರಲಿದೆ. ನಂತರ ದೇವಸ್ಥಾನದ ಎದುರಿನ ಪರಿವಾರ ದೈವಗಳಿಗೂ ತಂಬಿಲ ಸೇವೆ ಸಲ್ಲಿಸಲಾಗುವುದು.

ಎರಡೂ ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಬೇಕೆಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಗೌರವ ಸಲಹೆಗಾರರು ವಿನಂತಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top