ಜೇನು ಉತ್ಪನ್ನಗಳ ಪ್ರಚಾರ ವಾಹನಕ್ಕೆ ಕ್ಯಾ. ಬ್ರಿಜೇಶ್ ಚೌಟ ಮೆಚ್ಚುಗೆ

ಮಂಗಳೂರು: ಕರಾವಳಿ ಮೈದಾನದಲ್ಲಿ ನಡೆದ 73ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಉದ್ಘಾಟನೆಗೊಂಡ ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ, ಪುತ್ತೂರು ಇದರ ಜೇನು ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಸಿದ್ಧಪಡಿಸಲಾದ ನೂತನ ವಾಹನವನ್ನು ಮಂಗಳೂರು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಪರಿಶೀಲಿಸಿದರು.
ವಾಹನದ ವಿನ್ಯಾಸ, ಪ್ರಚಾರ ವ್ಯವಸ್ಥೆ ಹಾಗೂ ಜೇನು ಉತ್ಪನ್ನಗಳ ಮಾರಾಟಕ್ಕೆ ಕೈಗೊಂಡಿರುವ ವಿನೂತನ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಂಘದ ಈ ಕಾರ್ಯಕ್ಕೆ ಶುಭ ಹಾರೈಸಿದರು. ಜೇನು ಉತ್ಪನ್ನಗಳ ಪ್ರಚಾರ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಇಂತಹ ವಾಹನಗಳು ಸಹಕಾರಿಯಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರ್, ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು









































































Leave a Comment

Your email address will not be published. Required fields are marked *

error: Content is protected !!
Scroll to Top