ದೇವಚಳ್ಳ ಗ್ರಾಮದ ಅಡ್ಡನಪಾರೆ (ಪುಳಿಕುಕ್ಕು) ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ ಅಡ್ಡನಪಾರೆ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಜೂ.18) ನಿಧನರಾದರು. ಶಿಕ್ಷಕರಾಗಿ ಸೇವೆ ದರ್ಬೆತಡ್ಕ ಶಾಲೆಯಲ್ಲಿ ಸೇವೆ ಆರಂಭಿಸಿದ ಅವರು ಕಂದ್ರಪ್ಪಾಡಿ, ದೊಡ್ಡತೋಟ, ಅರಂತೋಡು, ಗಾಂಧಿನಗರ ಹಾಗೂ ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಸಲ್ಕಿಸಿ ನಿವೃತ್ತರಾಗಿದ್ದರು.
ಕೆಲ ವರ್ಷದಿಂದ ಪುತ್ರೂರಿನ ಕಲ್ಚರ್ಪೆಯಲ್ಲಿ ನೆಲೆಸಿದ್ದ ಅವರು ಅನಾರೋಗ್ಯಕ್ಕೆ ಒಳಗಾಗಿ ಮಣಿಪಾಲ ಕೆಎಂಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ನಾಗವೇಣಿ, ಪುತ್ರಿಯರಾದ ಕವಿತಾ ಮಹೇಶ್, ರಶ್ಮಿ ಉದಯಶಂಕರ, ಅಳಿಯಂದಿರು, ಸಹೋದರ, ಸಹೋದರಿ ಹಾಗೂ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ಕಾರ್ಯಕ್ರಮ ಅಡ್ಡನಪಾರೆಯಲ್ಲಿ ನಡೆಯಲಿದೆ.
ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ ಅಡ್ಡನಪಾರೆ ನಿಧನ





































































