ಸುಳ್ಯ: ಮರ್ಕಂಜ ಗ್ರಾಮದ ಸೇವಾಜೆ ನಿವಾಸಿ ದಿ. ಕುಶಾಲಪ್ಪ ಗೌಡ ಅವರ ಪುತ್ರ, ವ್ಯಾನ್ ಮಾಲಕ ಹಾಗೂ ಚಾಲಕರಾಗಿದ್ದ ಹರೀಶ್ ಸೇವಾಜೆ (47) ಅವರು ಅಸೌಖ್ಯದಿಂದ ಸೆ.30ರಂದು ಸಂಜೆ ನಿಧನರಾದರು.
ಹರೀಶ್ ಅವರು ಹಲವು ವರ್ಷಗಳಿಂದ ಸುಳ್ಯ–ಮಡಪ್ಪಾಡಿ ನಡುವೆ ವ್ಯಾನ್ ಸಂಚಾರ ನಡೆಸುತ್ತಿದ್ದರು. ಸ್ಥಳೀಯವಾಗಿ ಪ್ರಯಾಣಿಕರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು ಸರಳ ಹಾಗೂ ಸ್ನೇಹಪರ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು.
ಮೃತರು ತಾಯಿ ದಮಯಂತಿ, ಪತ್ನಿ ಸವಿತಾ, ಪುತ್ರರಾದ ಸಂಪತ್ ಹಾಗೂ ಹೇಮಂತ್ ಸೇರಿದಂತೆ ಬಂಧುಮಿತ್ರರನ್ನು ಅಗಲಿದ್ದಾರೆ
ವ್ಯಾನ್ ಮಾಲಕ, ಚಾಲಕ ಹರೀಶ್ ಸೇವಾಜೆ ನಿಧನ











