ಕರ್ನಾಟಕ ಸರ್ಕಾರದ ಆರೋಗ, ಕುಟುಂಬ ಕಲ್ಯಾಣ, ಮತ್ತು ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು. ಟಿ. ಖಾದರ್ ಫರೀದ್ ರವರು ಅ.,5ರಂದು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಭೇಟಿ ಮಾಡಿ ಸುಳ್ಯ ನಗರ ರಾಜ್ಯ ದಲ್ಲಿಯೇ ಶೈಕ್ಷಣಿಕ ನಗರಿ ಎಂದು ಗುರುತಿಸಲಾಗಿದ್ದು, ದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದಾರೆ, ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಸುಳ್ಯ ನಗರವು ಕೇರಳ ರಾಜ್ಯ, ಪ್ರವಾಸಿ ತಾಣ ವಾದ ಕೊಡಗು ಜಿಲ್ಲೆಗಳ ಗಡಿ ಪ್ರದೇಶ ವಾಗಿದೆ ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದು ಬಿಗಡಾ ಯಿಸಲಿದೆ, ಇದಕ್ಕೆ ಪರಿಹಾರ ವಾಗಿ ರಾಜ್ಯ ಹೆದ್ದಾರಿಗಳನ್ನು, ಜಿಲ್ಲಾ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಮತ್ತು ನಗರ ವ್ಯಾಪ್ತಿಯಲ್ಲಿರುವ ಒಳರಸ್ತೆ ಗಳನ್ನು ರಿಂಗ್ ( ವರ್ತುಲ ) ರಸ್ತೆ ಗಳನ್ನಾಗಿ ಅಭಿವೃದ್ಧಿ ಪಡಿಸಬೇಕಾದ ಅವಶ್ಯಕತೆ ಇರುತ್ತದೆ, ಅಲ್ಲದೇ ಕೆಲವು ವರ್ತುಲ ರಸ್ತೆಗಳನ್ನು ನಿರ್ಮಿಸಲು ಖಾಸಗಿ ಯವರು ಭೂಮಿ ಬಿಟ್ಟು ಕೊಡಲು ತಯಾರಿದ್ದು, ಅದನ್ನು ಸದುಪಯೋಗ ಪಡಿಸಿ ಕೊಳ್ಳಬೇಕಾಗಿದೆ ಇದನ್ನು ಅಭಿವೃದ್ಧಿ ಪಡಿಸಲು ಅನುದಾನ ದ ಅವಶ್ಯಕತೆಯಿದ್ದು ನಗರೋತ್ಥಾನ ಯೋಜನೆ ಯಡಿ ರೂ 5 ಕೋಟಿ ವಿಶೇಷ ಅನುದಾನ ಬಿಡುಗಡೆ ಗೊಳಿಸುವಂತೆ ಸಚಿವರಿಗೆ ಕೆ. ಎಂ
ಮುಸ್ತಫ ಮನವಿ ಮಾಡಿದರು
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎಂ. ವೆಂಕಪ್ಪ ಗೌಡ, ಎಸ್. ಸಂಶುದ್ದೀನ್, ಶಾಫಿ ಕುತ್ತಾಮೊಟ್ಟೆ, ರಾಜು ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.
ನಗರೋತ್ಥಾನ ಯೋಜನೆಯಡಿ ಸುಳ್ಯ ನಗರದ ವರ್ತುಲ ರಸ್ತೆ ಗಳ ಅಭಿವೃದ್ಧಿಗೆ ರೂ 5 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ಉಸ್ತುವಾರಿ ಸಚಿವರಿಗೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಮನವಿ











