ಕನಕಮಜಲು ಗ್ರಾಮದ ಆನೆಗುಂಡಿ ತಿರುವಿನ ಗುಡ್ಡಡ್ಕ ಸಮೀಪ ಅ.5ರಂದು ಮುಂಜಾನೆ ಎರಡು ಕಾಡಾನೆಗಳು ರಸ್ತೆ ದಾಟಿದ ಘಟನೆ ನಡೆದಿದೆ.
ಸುಮಾರು ಬೆಳಗ್ಗೆ 7.30ರ ವೇಳೆಗೆ ಎರಡು ಕಾಡಾನೆಗಳು ಏಕಾಏಕಿ ರಸ್ತೆಗೆ ಬಂದು ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಿವೆ. ಆನೆಗಳು ರಸ್ತೆ ದಾಟುತ್ತಿರುವುದನ್ನು ಕಂಡ ವಾಹನ ಸವಾರರು ಕೆಲಕಾಲ ಗೊಂದಲ ಹಾಗೂ ಆತಂಕಕ್ಕೆ ಒಳಗಾದರು. ಆನೆಗಳು ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನ ಸಂಚಾರವೂ ಕೆಲಕಾಲ ಎಚ್ಚರಿಕೆಯಿಂದ ಸಾಗುವಂತಾಯಿತು.
ಆದರೆ ಯಾವುದೇ ಅನಾಹುತ ಸಂಭವಿಸದೆ ಎರಡು ಆನೆಗಳು ರಸ್ತೆ ದಾಟಿ ಬಳಿಕ ಪಕ್ಕದ ಕಾಡಿನತ್ತ ತೆರಳಿವೆ. ಆನೆಗಳು ಕಾಡಿನೊಳಗೆ ಮರಳಿದ ಬಳಿಕ ವಾಹನ ಸಂಚಾರ ಸಹಜ ಸ್ಥಿತಿಗೆ ಬಂದಿದೆ.
ಕನಕಮಜಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಾಗ್ಗೆ ಕಾಡಾನೆಗಳ ಸಂಚಾರ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ರಸ್ತೆ ಬದಿಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಕನಕಮಜಲು : ಹಾಡುಹಗಲೇ ರಾಷ್ಟ್ರೀಯ ಹೆದ್ದಾರಿ ದಾಟಿ ಪ್ರಯಾಣಿಕರಿಗೆ ಆತಂಕ ಹಟ್ಟಿಸಿದ ಕಾಡಾನೆಗಳು











