ಮರ್ಕಂಜ: ಗ್ರಾಮದ ದಾಸರಬೈಲು ಎಂಬಲ್ಲಿ ಶಾಸಕರ ವಿಶೇಷ ಅನುದಾನದ ₹23 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನವನ್ನು ಶಾಸಕರು ಉದ್ಘಾಟಿಸಿದರು.
ಸ್ಥಳೀಯ ಜನರ ವಿವಿಧ ಕಾರ್ಯಕ್ರಮಗಳು ಹಾಗೂ ಸಭೆಗಳಿಗೆ ಅನುಕೂಲವಾಗುವಂತೆ ನಿರ್ಮಿಸಲಾಗಿರುವ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ ಕಂಜಿಪಿಲಿ, ಮಹಾಶಕ್ತಿಕೇಂದ್ರ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಕಾರ್ಯದರ್ಶಿ ಸತೀಶ್ ನಾಯ್ಕ ಅರಂತೋಡು, ಶಕ್ತಿ ಕೇಂದ್ರ ಪ್ರಮುಖರಾದ ಶಂಕರನಾರಾಯಣ ಉಪಾಧ್ಯಾಯ, ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ರಾವ್, ಮಾಜಿ ಸದಸ್ಯೆ ಸರಸ್ವತಿ, ಯುವಶಕ್ತಿ ಬಳಗದ ಅಧ್ಯಕ್ಷರು ಹಾಗೂ ಊರಿನ ಫಲಾನುಭವಿಗಳು ಉಪಸ್ಥಿತರಿದ್ದರು.
ಮರ್ಕಂಜದಲ್ಲಿ ರೂ23 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಶಾಸಕಿ ಭಾಗೀರಥಿ ಮುರುಳ್ಯರಿಂದ ಉದ್ಘಾಟನೆ











