ಸುಳ್ಯ ನಗರದ ರಥಬೀದಿಯ ವಿನಾಯಕ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ನವರಾತ್ರಿ ಹಬ್ಬದ ಪ್ರಯುಕ್ತ ಅಕ್ಟೋಬರ್ 31ರವರೆಗೆ ಇರಿಸಲಾಗುವ ಹೊಸ ಒಂದು ವರ್ಷದ ಅವಧಿಯ ಸ್ವರ್ಣನಿಧಿ ಠೇವಣಿ(FD)ಗಳಿಗೆ 12% ಹಿರಿಯ ನಾಗರಿಕರಿಗೆ 11.50% ಜನಸಾಮಾನ್ಯರಿಗೆ ಮತ್ತು ಸ್ವರ್ಣಧಾರ ಠೇವಣಿ(RD)ಗಳಿಗೆ ಒಂದು ವರ್ಷಕ್ಕೆ 11% ಬಡ್ಡಿ ದರ ಅಲ್ಲದೆ ರೂ. 1.00 ಲಕ್ಷ ಮೇಲ್ಪಟ್ಟು ಠೇವಣಿ ಇರಿಸಿದವರಿಗೆ ಉಚಿತ ಬೆಳ್ಳಿ ನಾಣ್ಯ ಯೋಜನೆಯನ್ನು ಸಹ ಪ್ರಕಟಿಸಿ ಠೇವಣಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಈ ವಿಶೇಷ ಬಡ್ಡಿದರಗಳ ಬಗ್ಗೆ ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿ ಪ್ರಚಾರ ಮಾಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿ 100ಕ್ಕಿಂತ ಅಧಿಕ ವೀಕ್ಷಣೆ (Views) ಪಡೆದವರು ಅದರ ಸ್ಕ್ರೀನ್‌ಶಾಟ್ ಕಳುಹಿಸುವಂತೆ ತಿಳಿಸಲಾಗಿತ್ತು. ಅಲ್ಲದೆ, ಕಳುಹಿಸಿದವರಲ್ಲಿ ಒಬ್ಬ ಅದೃಷ್ಟಶಾಲಿ ವಿಜೇತರಿಗೆ ಹಾಗೂ ಅತಿ ಹೆಚ್ಚು ವೀಕ್ಷಣೆ ಪಡೆದ ಸ್ಟೇಟಸ್‌ನ ಸ್ಕ್ರೀನ್‌ಶಾಟ್ ಕಳುಹಿಸಿದ ಒಬ್ಬರಿಗೆ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.
ಅದರಂತೆ ಅದೃಷ್ಟಶಾಲಿ ವಿಜೇತರಾದ ಅಶ್ವತ್ ಅಡ್ಕಾರ್ ಹಾಗೂ ಅತಿ ಹೆಚ್ಚು ವೀಕ್ಷಣೆ ಪಡೆದ ಸ್ಟೇಟಸ್ ಕಳುಹಿಸಿದ ರಜಿಯಾ ಗಾಂಧಿನಗರ ಇವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಅಧ್ಯಕ್ಷರಾದ ಜನಾರ್ದನ ದೋಳ, ಸಿಬ್ಬಂದಿ ಜ್ಯೋಸ್ನ ಮಂದ್ರಪ್ಪಾಡಿ ಸ್ವರ್ಣದಿನ ಠೇವಣಿ(ಪಿಗ್ಮಿ) ಸಂಗ್ರಾಹಕಿ ಸರಸ್ವತಿ ಎಂ, ಪಾಪ್ಯುಲರ್ ಸ್ವೀಟ್ಸ್‌ನ ಅನುಪ್ ಕಮಲಾಕ್ಷ ಪೈ ಉಪಸ್ಥಿತರಿದ್ದರು.
ಸ್ಟೇಟಸ್‌ಗಳ ಮೂಲಕ ಠೇವಣಿ ಅಭಿಯಾನವನ್ನು ಪ್ರಚಾರಪಡಿಸಲು ಸಹಕರಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಸೊಸೈಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಸ್ವರ್ಣಶ್ರೀ ಸೊಸೈಟಿ ಸುಳ್ಯ ವತಿಯಿಂದ ಬಹುಮಾನ ವಿತರಣೆ.
















