ಸುಳ್ಯ : ತೊಡಿಕಾನ ಸುಳ್ಯ ನಡುವೆ ಸೆ.16ರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ
ಆರಂಭಗೊಳ್ಳಲಿದೆ.
ಬಸ್ ಬೆಳಿಗ್ಗೆ 7.20ಕ್ಕೆ ಸುಳ್ಯದಿಂದ ಹೊರಟು 7.50ಕ್ಕೆ ತೊಡಿಕಾನ ತಲುಪಲಿದೆ. ತೊಡಿಕಾನದಿಂದ ಬೆ.8 ಗಂಟೆಗೆ ಹೊರಟು 8.30ಕ್ಕೆ ಸುಳ್ಯ ತಲುಪಲಿದೆ. ಸಂಜೆ 4.50ಕ್ಕೆ ಸುಳ್ಯದಿಂದ ಹೊರಟು 5.20ಕ್ಕೆ ತೊಡಿಕಾನ ತಲುಪಲಿದೆ. ಸಂಜೆ 5.30ಕ್ಕೆ ತೊಡಿಕಾನದಿಂದ ಹೊರಟು 6 ಗಂಟೆಗೆ ಸುಳ್ಯ ತಲುಪಲಿದೆ ಎಂದು ಡಿಪೋ ಮೆನೇಜರ್ ತಿಳಿಸಿದ್ದಾರೆ.
ತೊಡಿಕಾನ ಸುಳ್ಯ ನಡುವೆ ಸೆ.16ರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭ

























