ಸುಳ್ಯ, ಸೆ. 24: ರಂಗಮಯೂರಿ ಕಲಾ ಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ‘ಸಂಕಲ್ಪ ಮಕ್ಕಳ ಹಬ್ಬ–2026’ರ ಆಮಂತ್ರಣ ಪತ್ರಿಕೆಯನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ ಸುಳ್ಯ ಶ್ರೀ ಚೆನ್ನಕೇಶವ ದೇವಳದಲ್ಲಿ ಬಿಡುಗಡೆಗೊಳಿಸಿದರು.
ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಸಭಾಭವನದಲ್ಲಿ ಅ. 9ರಿಂದ 11ರವರೆಗೆ ನಡೆಯಲಿರುವ ಮಕ್ಕಳ ಹಬ್ಬದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ಪ್ರತಿಭಾ ಪ್ರದರ್ಶನಗಳು ನಡೆಯಲಿವೆ.
ಚಂದ್ರಶೇಖರ ಪೇರಾಲ್, ದಿನೇಶ್ ಮಡಪ್ಪಾಡಿ, ಡಾ. ಜ್ಞಾನೇಶ್, ಹರೀಶ್ ಬಂಟ್ವಾಳ್, ಲೋಕೇಶ್ ಊರುಬೈಲು, ರಂಜಿತ್ ಅಡ್ತಲೆ, ಯಶ್ವಿತ್ ಕಾಳಮನೆ, ಭವಾನಿಶಂಕರ ಅಡ್ತಲೆ, ಸಿ.ಆರ್.ಪಿ. ಮಮತ, ದುರ್ಗಾಕುಮಾರ್ ನಾಯರ್ ಕೆರೆ, ಕೃಷ್ಣ ಬೆಟ್ಟ, ಜಯಕೃಷ್ಣ, ಗಂಗಾಧರ ಮಟ್ಟಿ, ಸೌಮ್ಯ ಅಲಂಕಲ್ಯ, ಪ್ರಸನ್ನ ಐವರ್ನಾಡು, ಇಳಾಶ್ರೀ ಕಾಳಮನೆ ಹಾಗೂ ಶಿವಪ್ರಸಾದ್ ಆಲೆಟ್ಟಿ, ದಿನೇಶ್ ,ನಾಗವೇಣಿ ಕೋರಡ್ಕ ಉಪಸ್ಥಿತರಿದ್ದರು.
ಸುಳ್ಯದಲ್ಲಿ ಮಕ್ಕಳ ಪ್ರತಿಭೆಗೆ ವೇದಿಕೆ: ‘ಸಂಕಲ್ಪ ಮಕ್ಕಳ ಹಬ್ಬ–2026’ರ ಆಮಂತ್ರಣ ಪತ್ರಿಕೆ ಬಿಡುಗಡೆ

























