ನಾಪತ್ತೆಯಾಗಿದ್ದ ತಾಯಿ ಮಗು ಪತ್ತೆ !

ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಕುಂಟಿಕಾನದಿಂದ ನಾಪತ್ತೆಯಾಗಿದ್ದ ಮಹಿಳೆ ಮತ್ತು‌ ಮಗು ಪತ್ತೆಯಾದ ಘಟನೆ ವರದಿಯಾಗಿದೆ.
ಕುಂಟಿಕಾನ ನಿವಾಸಿ ವಿವಾಹಿತೆ ಮಹಿಳೆ ರಮ್ಯಾ ಎ.ವಿ. (೨೯ ವರ್ಷ) ಹಾಗೂ ಅವರ ಪುತ್ರಿ ಪ್ರಾಪ್ತಿ (೩ ವರ್ಷ) ನಾಪತ್ತೆಯಾಗಿ ಪತ್ತೆಯಾದವರು
ತಾಯಿ ಮತ್ತು ಮಗು ಅಗಸ್ಟ್‌ ೧೦ ರಿಂದ ಮನೆಯಿಂದ ನಾಪತ್ತೆಯಾಗಿದ್ದರು.
ಈ ಬಗ್ಗೆ ಸಂಬಂಧಿಕರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ಬೆಳ್ಳಾರೆ ಪೊಲೀಸರು ಮಹಿಳೆ ಮತ್ತು ಮಗುವನ್ನು ಹುಬ್ಬಳ್ಳಿಯಿಂದ ಪತ್ತೆ ಹಚ್ಚಿ ಕರೆತಂದು ಅವರನ್ನು ಅವರ ಮನೆಯವರಿಗೆ ಒಪ್ಪಿಸಿದ್ದಾರೆ. ಬೆಳ್ಳಾರೆ ಪೊಲೀಸ್‌ ಠಾಣಾ ಉಪನಿರೀಕ್ಷಕರಾದ ಈರಯ್ಯ ದೂಂತೂರುರವರ ಮಾರ್ಗದರ್ಶನದಲ್ಲಿ ಎ ಎಸ್ ಐ ರವೀಂದ್ರ ಮತ್ತು ಹೆಡ್ ಕಾನ್ಸೆಬಲ್ ಉದಯ ಗೌಡ ರವರು ಕಾರ್ಯಾಚರಣೆಯಲ್ಲಿ ಹುಡುಕಾಟದಲ್ಲಿ ಭಾಗವಹಿಸಿದ್ದರು‌.

























Leave a Comment

Your email address will not be published. Required fields are marked *

error: Content is protected !!
Scroll to Top