ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವನಸುಮ ವನವಾಸಿ ವಿದ್ಯಾರ್ಥಿನಿಲಯಕ್ಕೆ ಪುಸ್ತಕ ವಿತರಣೆ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವನಸುಮ ವನವಾಸಿ ವಿದ್ಯಾರ್ಥಿ ನಿಲಯ ಅಡ್ಕಾರ್ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಜುಲೈ 18ರಂದು ನಡೆಯಿತು.



































































































































ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷೆ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೊಂಟಡ್ಕ ವಹಿಸಿದ್ದರು.

ಜೇಸಿಐ ಭಾರತ ವಲಯ 15, ನೇತ್ರಾವತಿ (ರಿಜನ್ -ಬಿ) ಇದರ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ಜಿತೇಶ್ ಪಿರೆರಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಿದರು. ಅತಿಥಿಗಳಾಗಿ
ವನವಾಸಿ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಡಾ. ಚಂದ್ರಶೇಖರ ಭಟ್, ಜೇಸಿಐ ಸುಳ್ಯ ಪಯಸ್ವಿನಿ ಇದರ ಪೂರ್ವಾಧ್ಯಕ್ಷರಾದ ಚೆನ್ನಕೇಶವ ಜಾಲ್ಸೂರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯದರ್ಶಿ ತಾರ ಮಾಧವ ಚೂಂತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ವಿದ್ಯಾರ್ಥಿ ನಿಲಯಕ್ಕೆ ಸುಮಾರು 7,000ಕ್ಕೂ ಅಧಿಕ ಮೌಲ್ಯದ ಪುಸ್ತಕಗಳನ್ನು ನೀಡಿದ್ದು ಶಿಕ್ಷಣ ಯೋಜನೆಯತ್ತ ಕೈ ಜೋಡಿಸಿರುತ್ತಾರೆ. ಅಲ್ಲದೇ ಘಟಕದ ವತಿಯಿಂದ ರೂಪಾಯಿ 5000ವನ್ನು ವಿದ್ಯಾರ್ಥಿ ನಿಲಯಕ್ಕೆ ವಲಯ ಉಪಾಧ್ಯಕ್ಷರಾದ ಜೇಸಿಐ ಸೆನೆಟರ್ ಜಿತೇಶ್ ಪಿರೇರಾ ರವರು ದೇಣಿಗೆಯಾಗಿ ನೀಡಿದರು.
ನಿಲಯ ಪಾಲಕಿ ವೀರಮ್ಮ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಿಲಯದ ಮಾತೃಮಂಡಳಿ ಘಟಕದ ಸದಸ್ಯರಾದ ವೇದಾ ಶೆಟ್ಟಿ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top